ಪೂರ್ವಪದ ಪ್ರಧಾನವಾಗಿರುವ ಸಮಾಸ ಅಂಶಿಸಮಾಸ. ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು. === ಉದಾಹರಣೆಗಳು === ಹೊರಮೈ, ಮಧ್ಯರಾತ್ರಿ, ಮುಂಗಾಲು, ಒಳಮನೆ.ನಡುಮನೆ ನಡುಮನೆ. ಅಂಗಾಲು.ತುದ್ದಿಮುಗು, ಹಿಂಗಾಲು,ಅಂಗೈ, === ವಿಶೇಷತೆ === ಈ ಸಮಾಸದ ವಿಶೇಷವೇನೆಂದರೆ ವಿಗ್ರಹವಾಕ್ಯದಲ್ಲಿನ ಪೂರ್ವಪದ ಉತ್ತರಪದಗಳು ಸಮಾಸದಲ್ಲಿ ಅದಲುಬದಲಾಗುವುದು. ಮನೆಯ- ಒಳಗು >ಒಳಮನೆ. ಕೈಯ- ಅಡಿ >ಅಂಗೈ. # ಕಾಲಿನ- ಮುಂದು >ಮುಂಗಾಲು.